Actress and Dr Vishnuvardhan Wife Bharathi Vishnuvardhan has expressed displeasure over Sudeep. Bharathi Vishnuvardhan alleges that, before going to CM Sudeep hasn't met me & discussed with me.
ಡಿಸೆಂಬರ್ 30 ರಂದು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಪುಣ್ಯ ಸ್ಮರಣೆ. ಅದಕ್ಕಾಗಿಯೇ ವಿಷ್ಣು ಸ್ಮಾರಕಕ್ಕೆ ಸಂಬಂಧಪಟ್ಟ ಕೆಲಸಗಳು ಮತ್ತೆ ಜೀವ ಪಡೆದುಕೊಂಡಿದೆ. ಒಂದುಕಡೆ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ ಮಾಡುತ್ತಿದ್ರೆ, ಮತ್ತೊಂದೆಡೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ಕುಟುಂಬದವರು ಆಸೆ ಪಡುತ್ತಿದ್ದಾರೆ. ಹೀಗಿರುವಾಗ, ಮೊನ್ನೆಯಷ್ಟೇ ನಟ ಸುದೀಪ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ವಿಷ್ಣು ಸ್ಮಾರಕವನ್ನ ಮೈಸೂರಿನಲ್ಲೇ ಮಾಡಿ, ಆದ್ರೆ, ಅಂತ್ಯ ಸಂಸ್ಕಾರವಾದ ಜಾಗವನ್ನ ಅಭಿಮಾನಿಗಳಿಗೆ ಬಿಟ್ಟುಕೊಡಿ ಎಂದು ಮನವಿ ನೀಡಿದ್ದರು. ಈ ಸಂಗತಿ ಭಾರತಿ ವಿಷ್ಣುವರ್ಧನ್ ಅವರ ಕಿವಿಗೆ ಬಿದ್ದಿದ್ದು, ಸುದೀಪ್ ಅವರ ಮೇಲೆ ವಿಷ್ಣುವರ್ಧನ್ ಮಡದಿ ಅಸಮಾಧಾನಗೊಂಡಿದ್ದಾರಂತೆ. ಹಾಗಿದ್ರೆ, ಕಿಚ್ಚನ ಈ ನಡೆ ಬಗ್ಗೆ ಭಾರತಿ ಅವರು ಏನಂದ್ರು? ಸುದೀಪ್ ಅವರು ಮುಖ್ಯಮಂತ್ರಿ ಅವರನ್ನ ಭೇಟಿ ಮಾಡಿರುವುದು ನನಗೆ ಗೊತ್ತಿಲ್ಲ. ಆದ್ರೆ, ಮುಖ್ಯಮಂತ್ರಿ ಅವರು ನಮಗೆ ಭರವಸೆ ನೀಡಿದ್ದಾರೆ.